Skip to main content

Posts

Showing posts from October, 2023

ಕಷ್ಟದಲ್ಲಿ ಅರಳಿದ ಕಮಲ

ಜ್ಞಾನಭಂಡಾರದ ಶಕ್ತಿ, ಸರಸ್ವತಿಯೇ ನಾಚುವಂತಹ ಬುದ್ಧಿಶಕ್ತಿ, ವಿಶ್ವಕ್ಕೆ ಮಾದರಿಯಾದ ಸಂವಿಧಾನವನು ನಿರ್ಮಿಸಿದ ಯುಕ್ತಿ ಇರುವ ಧೀಮಂತ ವ್ಯಕ್ತಿಯ ಜನನ ೧೮೯೧ ಏಪ್ರಿಲ್ ೧೪ ರಂದು ಭೀಮಬಾಯಿ ಹಾಗೂ ರಾಮಜಿ ಅವರ 14ನೇ ಹಾಗೂ ಕೊನೆಯ ಮಗನಾಗಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡಿಯ ಮಹಾರ್ ಜಾತಿಯಲ್ಲಿ ಭೀಮರಾವ್ ರಾಮಜೀ ಅಂಬೇಡ್ಕರ್ಎಂಬ ನಾಮಧಾರಿ ಯಾಗಿ ಜನನ ಪಡೆದರು. ‌ ಬಡತನದ ಕಗ್ಗತ್ತಲು ಒಂದೆಡೆಯಾದರೆ ಅಸ್ಪೃಶ್ಯತೆಯ ಅಲೆಗಳ ಭೋರ್ಗರೆತ ಇನ್ನೊಂದೆಡೆ. ಇದರ ಮಧ್ಯದಲ್ಲಿ 1896 ರಲ್ಲಿ ತನ್ನ ಹಡೆದೌವನ ಕಳೆದುಕೊಂಡರು. ಅತ್ತೆಯ ಆರೈಕೆಯಲ್ಲಿ ಬೆಳೆದ ಅಂಬೇಡ್ಕರ್ ಓದಲು ಬಲು ಆಸಕ್ತರು.  1890 ರಲ್ಲಿ ಸತಾರಾದ ಸರ್ಕಾರಿ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಅಸ್ಪೃಶ್ಯತೆಯ ಕರಾಳ ಅನುಭವಗಳ ನಡುವೆ ನಿರ್ವಹಿಸಲು ಧೈರ್ಯ ದಿಂದ ಮುಂದಾದರು. ಬಾಲಕನಾಗಿದ್ದಾಗ ಇವರು ಊರ ಕೆರೆಯಲ್ಲಿ ನೀರು ಕುಡಿದಕ್ಕೆ ಊರಿನವರಿಂದ ಪೆಟ್ಟು ತಿಂದರೂ. ಒಂದು ಬಾರಿ ಗಾಡಿಯಲ್ಲಿ ಹೋಗುವಾಗ ಇವರು ದಲಿತ ನೆಂದು ತಿಳಿದದಕ್ಕೆ ಜನ ಇವರನ್ನ ಗಾಡಿಯಿಂದ ಹೊರದೂಡಿದರು. ಆದರೆ ಈ ಅನುಭವಗಳನ್ನು ಛಲವಾಗಿ ಸ್ವೀಕರಿಸದೆ ಇದಿದ್ದರೆ ವಿಶ್ವವೇ ಮೆಚ್ಚುವಂತ ಮಹಾನ್ ಗ್ರಂಥವನ್ನು ಕೊಡಲು ಸಾಧ್ಯವಾಗುತ್ತಿರಲಿಲ್ಲ. ೧೯೦೬ ಏಪ್ರಿಲ್ ನಾಲ್ಕರಂದು ರಮಾಬಾಯಿ ಎಂಬವರೊಡನೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟ ಅಂಬೇಡ್ಕರ್ಗೆ ಆಗ ೧೫ ವರ್ಷ .೧೯೦೭ ರಲ್ಲಿ ಮೆಟ್ರಿಕ್ಯುಲೇ...

ಬೀಳುವುದು ತಪ್ಪಲ್ಲ ಬಿದ್ದು ಮೇಲೇಳದಿರುವುದು ತಪ್ಪು!

ಆಕಾಶದಿಂದ ಉದರಕ್ಕೆ ಉದುರುವ ಮಳೆಯೂ ಬಿದ್ದೇನೆಂದು ಮರಳಿ ಮೇಲೇಳದಿದ್ದರೆ ಮೊಡವಾಗುವುದೇ. ಸಾಗುವ ದಾರಿ ದೂರವೆಂದು ನದಿಯು ಹರಿಯುವುದನ್ನು ನಿಲ್ಲಿಸಿದರೆ ವಿಶಾಲ ಸಮುದ್ರವನ್ನ ತಲುಪಲು ಸಾಧ್ಯವೇ. ಇಲ್ಲವಲ್ಲವೇ ಓದುಗರೇ!     ನಾವು ಮಾನವರು, ಜಗತ್ತಿನ ಬುದ್ದಿಜೀವಿಗಳು, ಸಕಲವನ್ನೂ ಅರಿತವರು, ಆದರೇ ಜೀವಾರಾಹಿತ ವಸ್ತುಗಳಿಗೆ ಇರುವ ಸಾಮಾನ್ಯ ಪ್ರಜ್ಞೆ ಇಲ್ಲದ ಪ್ರಜ್ಞಾವಂತರು. ಜೀವನದಲ್ಲಿ ಏಳು ಬಿಳು ಸರ್ವೇ ಸಾಮಾನ್ಯ. ಬಿದ್ದರೆ ಕುಗ್ಗಿ ಹೋಗುವ ಧೀಮಂತರು ಅನೇಕರಾದರೆ ಬೀಳನ್ನೇ ಛಲವಾಗಿ ಸ್ವೀಕರಿಸಿ ಮೇಲೇಳುವವರು ಬೆರಳೆಣಿಕೆಯಷ್ಟು. ಇವರೇ ನಮ್ಮ ಕಣ್ಣಿಗೆ ಕಾಣುವ ಜೀವನ ಸಾಧಕರು. ಇವರು ಸಾಗಬೇಕಾದ ದಾರಿಯನ್ನು ಲೆಕ್ಕಿಸದೆ ಮುನ್ನುಗಿ ವಿಷಾಲ ಜಗತ್ತಿಗೆ ಮಾದರಿಯಾಗುವರು.       ಹೌದು! ಓದುಗರೇ. ಭಾರತದ ಜೇಮ್ಸ್ ಬಾಂಡ್" (Indian James Bond) ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ. ತಮ್ಮ ಜೀವಿತದ 40 ವರ್ಷವನ್ನು ದೇಶದ ರಕ್ಷಣೆಯ ವಿಚಾರವಾಗಿಯೇ ಕಳೆದಿರುವ ಧೈರ್ಯ ಹಾಗೂ ದೇಶಭಕ್ತಿಯ ಒಂದೇ ರೂಪವಾಗಿರುವ ಅಜಿತ್ ಧೋವಲ್ ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಜನ್ಮದಿನದ ,ಶುಭಾಶಯಗಳು ಬಂದಿವೆ. ಶತ್ರು ದೇಶದಲ್ಲಿ ಉಳಿದುಕೊಂಡು ಭಾರತೀಯ ಸೇನೆಗೆ ಮಾಹಿತಿಯನ್ನು ರವಾನೆ ಮಾಡುತ್ತಿದ್ದ ಅಜಿತ್ ಧೋವಲ್, ದೇಶದ ಬಹುಮುಖ್ಯ ಸಾಧನೆಗಳಾದ ಆಪರೇಷನ್ ಬ್ಲ್ಯಾಕ್ ಥಂಡರ್, ಸರ್ಜಿಕಲ್ ಸ್ಟ್ರೈಕ್ ...

ಬೆಲೆ ಕಟ್ಟಲಾಗದ ಮಾಣಿಕ್ಯ!

ಜೀವನದಲ್ಲಿ ಏನನ್ನು ಪಡೆದಿದ್ದರು ಪಡೆಯದಿದ್ದರೂ ನಾವು ಸುಖದಿಂದ ಇರಬಹುದು . ಆದರೆ ಆ ಇಬ್ಬರು ದೇವರುಗಳು ಇಲ್ಲದ ಬದುಕು ಬರಡು. ಹೌದು ಓದುಗರೆ ತಂದೆ ತಾಯಿಗಳೆಂಬ ದೇವರು ಬೆಲೆಕಟ್ಟಲಾಗದ ಮಾಣಿಕ್ಯಧಷ್ಟು ಅಮೂಲ್ಯ. ಜಗತ್ತಿನಲ್ಲಿ ಯಾವ ದೇವರುಗಳು ದೊಡ್ಡದೆಂದರೆ ಅದು ತಂದೆ ತಾಯಿಯೇ. ಏಕೆಂದರೆ ಅವರಿಲ್ಲದೆ ನಾವಿಲ್ಲ. ಪ್ರಪಂಚದಲ್ಲಿ ಯಾವ ತಾಯಿಯು ತನ್ನ ಮಗನಿಗೆ ಕೆಡಕು ಬಯಸಿದ ಸನ್ನಿವೇಶವೇ ಇಲ್ಲ. ಯಾವ ತಂದೆಯು ತನ್ನ ಮಗನನ್ನು ಪ್ರೀತಿಸದಾ ನಿದರ್ಶನವಿಲ್ಲ. ಆದರೆ ಈ ವಜ್ರಗಳನ್ನು ದ್ವೇಷ ಮಾಡುವ ಬೈಯುವಂತಹ ನೀಚ ಮಕ್ಕಳಿದ್ದಾರೆ ಎಂದರೆ ನಂಬಲು ಅಸಾಧ್ಯ ಆದರೆ ಅದೇ ಸತ್ಯ.                     ತಾನ್ನ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಮಕ್ಕಳಿಗೆ ಕೈತುತ್ತು ಇಟ್ಟ ತಾಯಂದಿರಿದ್ದಾರೆ ಬೆಳಗ್ಗೆ ರಾತ್ರಿ ಎಂದು ನೋಡದೆ ದೇಹ ಸವಿಸಿ ದುಡಿದ ತಂದೆಯಂದಿರು ಇದ್ದಾರೆ. ಇವರ ಕಷ್ಟ ಮಕ್ಕಳ ಮನಸ್ಸಿಗೆ ಗೊತ್ತಾಗುವುದಿಲ್ಲವೆ. ತನ್ನ ಮಗ ಕುರೂಪಿಯಾಗಿದ್ದರೆ ಎದೆ ಹಾಲು ಕೊಡುವುದನ್ನು ನಿಲ್ಲಿಸಿದ ತಾಯಂದಿರಿಲ್ಲ. ಆದರೆ ತಾಯಿ ಆಚಾತುರ್ಯವಾಗಿ ಕಾಯಿಲೆ ಹೊಂದಿದರೆನೋಡಿಕೊಳ್ಳಲಾಗದೆ ಅವರನ್ನು ವೃದ್ಧಾಶ್ರಮಕ್ಕೆ ತಳೋ ಮಕ್ಕಳಿದ್ದಾರೆ ಸ್ವಾಮಿ. ಮಗನಿಗೆ ಹುಷಾರ್ ಇಲ್ಲದಿದ್ದರೆ ಹೆಗಲ ಮೇಲೆ ಹೊತ್ತುಕೊಂಡು ಹೋದ ತಂದೆ ಇದ್ದಾರ...

ದೂರಾಗೋಳ್ಳಲಿ ಅಪೌಷ್ಟಿತಿಕತೆ !

 ವಿಶ್ವದಲ್ಲಿ ಅಪೌಷ್ಟಿಕತೆ ತಾಂಡವವಾಡುತ್ತಿದ್ದು ಭಾರತ ಅದರ ರಾಯಭಾರಿ ಆಗಿದೆ. ಹೌದು ! ವಿಶ್ವದಲ್ಲಿ ಕುಂಠಿತ ಬೆಳವಣಿಗೆಯಾದ ಜನರ ಸಂಖ್ಯೆ 150.8 ದಶಲಕ್ಷ ಇದ್ದರೆ ಅದರಲ್ಲಿ ಭಾರತೀಯರು 46.6 ದಶಲಕ್ಷದಷ್ಟು ಇದ್ದಾರೆ. ಇದರಲ್ಲಿ 34.7% ರಷ್ಟು 5 ವರ್ಷದ ಒಳಗಿನ ಪುಟ್ಟ ಮಕ್ಕಳು ಕುಂಠಿತ ಬೆಳವಣಿಗೆಗೆ ಒಳಗಾಗಿದ್ದಾರೆ.ಆದರೇ ನಮ್ಮ ಸಮಾಜದ ಯಾವುದೇ ಮಗುವು ಹಿಂದುಳಿಯಲು ಬಯಸುವುದಿಲ್ಲ, ಆದರು ಆ ಹಿಂದುಳಿಯುವಿಕೆಗೆ ನೂಕುವುದು ಕುಪೋಷಣೆ. ಈ ಅಪೌಷ್ಟಿಕತೆಯನ್ನು ತಡೆಯಲು ಸೆಪ್ಟಂಬರ್ ಮೊದಲವಾರವನ್ನು ಪೌಷ್ಟಿಕ ವಾರ ಎಂದು ಪರಿಗಣಿಸಿರುವುದು. ಭಾರತವನ್ನು ಏಕೆ ಕಾಡುತ್ತಿದೆ ಅಪೌಷ್ಟಿಕತೆ? ಭಾರತದಲ್ಲಿ ಕುಂಠಿತ ಬೆಳವಣಿಗೆ ಸಮಸ್ಯೆಗೆ ಒಳಗಾದವರು ಎಷ್ಟಿದ್ದಾರೆ ಅಷ್ಟೇ ಅತಿಯಾದ ಬೊಜ್ಜಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಅಷ್ಟೇ ಇದ್ದಾರೆ . ಇದು ನಮ್ಮ ದೇಶದ ವ್ಯವಸ್ಥೆಯ ಪ್ರಭಾವ.   ಬಡತನ ಹಾಗೂ ಆಹಾರ ಬೆಲೆಗಳು:         ದಿನದಿಂದ ದಿನಕ್ಕೆ ಆಹಾರ ಪದಾರ್ಥದ ಬೆಲೆ ಹೆಚ್ಚಾಗುತ್ತಿದ್ದು ಬಡತನದಲ್ಲಿ ಬದುಕುವವರು ಇವುಗಳನ್ನು ಕೊಳ್ಳಲಾಗದೆ ತಮ್ಮ ಬೆಲೆಗೆ ಸಿಗುವ ಪದಾರ್ಥಗಳನ್ನು ಕೊಳ್ಳುತ್ತಾರೆ. ಪ್ರತಿನಿತ್ಯ ಅದೇ ಪದಾರ್ಥಗಳನ್ನು ಬಳಸುವುದರಿಂದ ಇತರೆ ಪದಾರ್ಥಗಳಲ್ಲಿರುವ ಶಕ್ತಿ ಅವರಿಗೆ ತಲುಪುವುದಿಲ್ಲ. ಹೀಗಾಗಿ ಅವರು ಅಪೌಷ್ಟಿಕತೆಗೆ ತುತ್ತಾಗುತ್ತಿದ್ದಾರೆ.   ಆಹಾರ ಸೇವನೆ ಪದ್ಧತಿಗಳು...