Skip to main content

Posts

Showing posts from December, 2023

2001 ರ ಸಂಸತ್ ದಾಳಿಯ 22 ವರ್ಷಗಳ ನಂತರ, ಮರುದಾಳಿಯ ಯತ್ನ?

ಐವರು ಭಯೋತ್ಪಾದಕರು ಸಂಸತ್ ಭವನದ ಸಂಕೀರ್ಣಕ್ಕೆ ನುಗ್ಗಿ ಎಂಟು ಭದ್ರತಾ ಸಿಬ್ಬಂದಿ ಮತ್ತು ಒಬ್ಬ ತೋಟಗಾರನನ್ನು ಕೊಂದ ಕರಾಳ ನೆನಪಿನಲ್ಲಿದ್ದ ಸಂಸದರಿಗೆ ಇಂದು ಇಬ್ಬರು ಅಪರಿಚಿತರು ಪ್ರೇಕ್ಷಕರ ವೀಕ್ಷಣಲಾಯದಿಂದ ಜಿಗಿದು ಸಂಸದರನ್ನ ಬೆಚ್ಚಿಬಿಳಿಸಿದ್ದಾರೆ. 22 ವರ್ಷಗಳ ಹಿಂದೆ ಏನಾಯಿತು?                  ಡಿಸೆಂಬರ್ 13, 2001 ರ ಬೆಳಿಗ್ಗೆ ಐವರು ಭಯೋತ್ಪಾದಕರು 11:40 ರ ಸುಮಾರಿಗೆ ಸಂಸತ್ ಭವನದ ಸಂಕೀರ್ಣವನ್ನು ಅದರ ವಿಂಡ್ ಶೀಲ್ಡ್ನಲ್ಲಿ ನಕಲಿ ಗೃಹ ಸಚಿವಾಲಯದ ಸ್ಟಿಕ್ಕರ್ ಅನ್ನು ಅಳವಡಿಸಿದ ಕಾರಿನಲ್ಲಿ ಪ್ರವೇಶಿಸಿದರು. ಅನುಮಾನದ ಮೇಲೆ, ಕಾರನ್ನು ಹಿಂದಕ್ಕೆ ತಿರುಗಿಸಲು ಒತ್ತಾಯಿಸಲಾಯಿತು, ನಂತರ ಭಯೋತ್ಪಾದಕರು ಕೆಳಗಿಳಿದು ಗುಂಡಿನ ದಾಳಿ ನಡೆಸಿದರು. ಇದು ಎಚ್ಚರಿಕೆಯನ್ನು ಮೂಡಿಸಿತು ಮತ್ತು ಎಲ್ಲಾ ಕಟ್ಟಡದ ಗೇಟ್‌ಗಳನ್ನು  ಮುಚ್ಚಲಾಯಿತು. ಆ ಸಮಯದಲ್ಲಿ, 100 ಕ್ಕೂ ಹೆಚ್ಚು ಮಂತ್ರಿಗಳು ಮತ್ತು ಸಂಸದರು ಸಂಸತ್ತಿನ ಒಳಗೆ ಉಪಸ್ಥಿತರಿದ್ದರು.               ಸುಮಾರು 30 ನಿಮಿಷಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಭಯೋತ್ಪಾದಕರು, ಎಂಟು ಮಂದಿ ಭದ್ರತಾ ಸಿಬ್ಬಂದಿ ಮತ್ತು ಓರ್ವ ತೋಟಗಾರ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ.             ಈ ದಾ...

ಮೊಬೈಲ್ ದೇಹದ ಅವಿಭಾಜ್ಯ ಅಂಗ !

ಬದುಕಲು ಬೇಕಾದ ಗಾಳಿ ನೀರು ಬೆಳಕು ಬಟ್ಟೆ ಮನೆಯಂತೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕೂಡ ದೇಹಕ್ಕೆ ಬೇಕಿರುವ ಒಂದು ಅತ್ಯಗತ್ಯ ವಸ್ತುವಿನಂತೆ ಅನೇಕರಿಗೆ ಆಗಿ ಹೋಗಿದೆ. ಹೌದು ಮೊಬೈಲ್ ಇಲ್ಲದೆ ಕೆಲವರಿಗೆ ಜೀವನವಿಲ್ಲ, ಮೊಬೈಲ್ ನೋಡುತ್ತಾ ಎದ್ದರೆ ಅದನ್ನು ನೋಡುತ್ತಾ ಮಲಗುವುದೇ ಸರ್ವೇ ಸಾಮಾನ್ಯವಾಗಿದೆ . ನೀವು ಒಂದು ಗುಂಪಿನ ಮಧ್ಯದಲ್ಲಿ ನಿಂತು ನೋಡಿ ಅದೆಷ್ಟು ಜನ ಮೊಬೈಲ್ ಬಳಕೆಯಲ್ಲಿ ಮಗ್ನರಾಗಿರುತ್ತಾರೆ ಅಂತ , ಸಂಖ್ಯೆಯಂತೂ ಶೇ೭೦% ಗಿಂತ ಹೆಚ್ಚೆ ಇರುತ್ತದೆ. ಗಾಡಿ ಚಲಿಸುವಾಗ, ದೇವಸ್ಥಾನದಲ್ಲಿ, ಉಪಹಾರ ಸೇವಿಸುವಾಗ ಅಷ್ಟೇ ಅಲ್ಲದೆ ಟಾಯ್ಲೆಟ್ ಹೋಗುವಾಗಲೂ ಮೊಬೈಲ್ ಬಳಸುವ ಧೀಮಂತರನ್ನು ನೋಡಿದ್ದೇವೆ.      ಮೊಬೈಲ್ ಕೆಟ್ಟ ವಸ್ತುವೇ ? ಮೊಬೈಲ್ ಜನರ ಜೀವನಾಡಿ ಆಗಿದೆ ಎಂದರೆ ತಪ್ಪಿಲ್ಲ , ನಮಗೆ ಏನು ಬೇಕಾದರೂ ಏನನ್ನೇ ತಿಳಿದುಕೊಳ್ಳ ಬೇಕಾದರು ಎಲ್ಲದಕ್ಕೂ ಮೊಬೈಲ್ ಬೇಕು. ಸಂಬಂಧಗಳ ಬೆಸೆಯಲು  ಮೊಬೈಲ್ಬೇಕು, ವಿದ್ಯೆಗಾಗಿಯೂ ಬೇಕು  ಹಿಗಾಗಿ ಇದು ಕೆಟ್ಟ ವಸ್ತುವೇನಲ್ಲ ಆದರೇ ನಾವು ಬಳಸುವ ರೀತಿ ನೀತಿಯಲ್ಲಿ ಕೆಟ್ಟದಾಗಿ ಕಾಣುತ್ತಿದೆ ಅಷ್ಟೇ .  ಹೌದು, ಮೊಬೈಲ್ ನೋಡುತ್ತಾ ತಲೆ ಬಾಗಿಸಿದವರು ಜೀವನ ಪೂರ್ತಿ ತಲೆ ತಗ್ಗಿಸಿ ಇರುವಂತಾಗಿರುವ ಸಂಗತಿಗಳು ಇವೆ, ಮತ್ತು ಇದೆ ಮೊಬೈಲ್ ಮುಖಾಂತರ ಅದೆಷ್ಟೋ ಜೀವ ಜಗತ್ತನ್ನು ಬಿಟ್ಟು ಹೋಗಿದ್ದು ಇದೆ,  ಮೊಬೈಲ್ ಕೊಳ್ಳಲು ಕಿಡ್ನಿ ಮಾರಿದ್ದು, ಮನೆ...