ಬದುಕಲು ಬೇಕಾದ ಗಾಳಿ ನೀರು ಬೆಳಕು ಬಟ್ಟೆ ಮನೆಯಂತೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕೂಡ ದೇಹಕ್ಕೆ ಬೇಕಿರುವ ಒಂದು ಅತ್ಯಗತ್ಯ ವಸ್ತುವಿನಂತೆ ಅನೇಕರಿಗೆ ಆಗಿ ಹೋಗಿದೆ.
ಹೌದು ಮೊಬೈಲ್ ಇಲ್ಲದೆ ಕೆಲವರಿಗೆ ಜೀವನವಿಲ್ಲ, ಮೊಬೈಲ್ ನೋಡುತ್ತಾ ಎದ್ದರೆ ಅದನ್ನು ನೋಡುತ್ತಾ ಮಲಗುವುದೇ ಸರ್ವೇ ಸಾಮಾನ್ಯವಾಗಿದೆ . ನೀವು ಒಂದು ಗುಂಪಿನ ಮಧ್ಯದಲ್ಲಿ ನಿಂತು ನೋಡಿ ಅದೆಷ್ಟು ಜನ ಮೊಬೈಲ್ ಬಳಕೆಯಲ್ಲಿ ಮಗ್ನರಾಗಿರುತ್ತಾರೆ ಅಂತ , ಸಂಖ್ಯೆಯಂತೂ ಶೇ೭೦% ಗಿಂತ ಹೆಚ್ಚೆ ಇರುತ್ತದೆ. ಗಾಡಿ ಚಲಿಸುವಾಗ, ದೇವಸ್ಥಾನದಲ್ಲಿ, ಉಪಹಾರ ಸೇವಿಸುವಾಗ ಅಷ್ಟೇ ಅಲ್ಲದೆ ಟಾಯ್ಲೆಟ್ ಹೋಗುವಾಗಲೂ ಮೊಬೈಲ್ ಬಳಸುವ ಧೀಮಂತರನ್ನು ನೋಡಿದ್ದೇವೆ.
ಮೊಬೈಲ್ ಕೆಟ್ಟ ವಸ್ತುವೇ ?
ಮೊಬೈಲ್ ಜನರ ಜೀವನಾಡಿ ಆಗಿದೆ ಎಂದರೆ ತಪ್ಪಿಲ್ಲ , ನಮಗೆ ಏನು ಬೇಕಾದರೂ ಏನನ್ನೇ ತಿಳಿದುಕೊಳ್ಳ ಬೇಕಾದರು ಎಲ್ಲದಕ್ಕೂ ಮೊಬೈಲ್ ಬೇಕು. ಸಂಬಂಧಗಳ ಬೆಸೆಯಲು ಮೊಬೈಲ್ಬೇಕು, ವಿದ್ಯೆಗಾಗಿಯೂ ಬೇಕು ಹಿಗಾಗಿ ಇದು ಕೆಟ್ಟ ವಸ್ತುವೇನಲ್ಲ ಆದರೇ ನಾವು ಬಳಸುವ ರೀತಿ ನೀತಿಯಲ್ಲಿ ಕೆಟ್ಟದಾಗಿ ಕಾಣುತ್ತಿದೆ ಅಷ್ಟೇ .
ಹೌದು, ಮೊಬೈಲ್ ನೋಡುತ್ತಾ ತಲೆ ಬಾಗಿಸಿದವರು ಜೀವನ ಪೂರ್ತಿ ತಲೆ ತಗ್ಗಿಸಿ ಇರುವಂತಾಗಿರುವ ಸಂಗತಿಗಳು ಇವೆ, ಮತ್ತು ಇದೆ ಮೊಬೈಲ್ ಮುಖಾಂತರ ಅದೆಷ್ಟೋ ಜೀವ ಜಗತ್ತನ್ನು ಬಿಟ್ಟು ಹೋಗಿದ್ದು ಇದೆ, ಮೊಬೈಲ್ ಕೊಳ್ಳಲು ಕಿಡ್ನಿ ಮಾರಿದ್ದು, ಮನೆ ಮಠ ಬಿಟ್ಟು ಓಡಿ ಹೋದೋರು ಇದ್ದಾರೆ. ಆದರೂ ಇನ್ನು ಮಕ್ಕಳಿಂದ ಮುದುಕರವರೆಗೂ ಮೊಬೈಲ್ ಮೋಡಿಯ ಬಲೆಯಲ್ಲಿ ಸಿಲುಕಿಕೊಂಡಿರುವುದು ಖೇದಕರ.
ಮೊಬೈಲ್ ಇಲ್ಲದೆ ಬದುಕೇ ಇಲ್ಲವೇ?
ಇಂದಿನ ನಾಗರೀಕರಣದ ಜಗತ್ತಿನಲ್ಲಿ ಮೊಬೈಲ್ ಅತ್ಯಗತ್ಯ, ಆದರೆ ಅದಿಲ್ಲದೆ ಬದುಕು ನಶ್ವರವೇನಲ್ಲ. ಹೌದು ಕೆಲವು ವರ್ಷಗಳ ಹಿಂದೆ ಅಷ್ಟೇ ಬಂದ ಮೊಬೈಲ್ ನಮ್ಮನ್ನು ನಮ್ಮ ಅರಿವಿಗಿಂತ ಜಾಸ್ತಿ ಮೋಡಿ ಮಾಡಿದೆ ಸ್ನೇಹಿತರೇ , ಆದರೇ ಇದರ ಪರಿಣಾಮ ಉತ್ತಮ ಇದ್ದರು ಅದೆಷ್ಟೋ ಜನರ ಜೀವನವನ್ನು ಹಾಳು ಮಾಡಿದೆ. ಒಮ್ಮೆ ಇದರ ಸುಳಿಯಲ್ಲಿ ಸಿಲುಕಿದರೆ ಹೊರ ಬರುವುದೇ ಕಷ್ಟ. ಅನೇಕರು ಎದ್ದ ತಕ್ಷಣವೇ ಮೊಬೈಲ್ ಮುಖ ನೋಡುವವರ ಜೀವನ ಮೊಬೈಲ್ ಮಲಗಿದ ಮೇಲೇ ಮಲಗುವುದರಿಂದ ದಿನವನ್ನ ಪೂರ್ತಿಗೊಳಿಸುತ್ತಿದ್ದಾರೆ. ಇಷ್ಟೊಂದು ಅಗತ್ಯವಿದೆ ಎಂದು ನಿಮಗೆ ಅನಿಸುತ್ತಿದೆಯ? ನೀವು ಈ ಗುಂಪಿನಲ್ಲಿ ಸೇರಿದ್ದರೆ ಯೋಚಿಸಿ ನಿಮ್ಮ ಜೀವನ ಬದಲಾವಣೆಗೆ ಮೊಬೈಲ್ ಎಷ್ಟು ಅಡ್ಡಿಯಾಗಿದೆ ಎಂದು!
ಅಷ್ಟೇ ಅಲ್ಲದೆ ನಮ್ಮ ಪೂರ್ವಜರು ಯಾರು ಕೂಡ ಮೊಬೈಲ್ ಬಳಕೆಯ ಅರಿವನ್ನು ಹೊಂದಿರಲಿಲ್ಲ , ಆದರೂ ಅದೆಷ್ಟೋ ಸಾಧನೆಗಳನ್ನು ಸಾಧಿಸಿ ಸುಖವಾಗಿ ಜೇವನವ ಸಾಗಿಸಿ ನೇಮ್ಮದಿಯ ನಿಟ್ಟುಸಿರನ್ನು ಬಿಟ್ಟಿದ್ದಾರೆಂದು ಮರೆಯಬೇಡಿ.
ಆದರೆ ನಾವುಗಳು,
ಗೂಗಲ್ ಭ್ರಹ್ಮ
ವಾಟ್ಸಪ್ ವಿಷ್ಣು
ಫೇಸ್ಬುಕ್ ದೇವೋ ಮಹೇಶ್ವರ
ಸ್ನ್ಯಾಪ್ ಚಾಟ್ ಸಾಕ್ಷಾತ್ ಪರಬ್ರಹ್ಮ
ತಾತ್ಸಾಮೈಶ್ರೀ ಐ ಫೋನ್ ನಮಃ! ಎಂದು ಸಕಲ ಸಮಸ್ಯೆಗೂ ಫೋನೇ ಮದ್ಧಗಿದೆ ಆದರೆ ಅದು ಮದ್ಧಲ್ಲ ಸ್ಲೋ ಪಾಯಿಸನ್ ಎಂದು ಅರಿತುಕೊಳ್ಳ ಬೇಕಾಗಿದೆ.
ಮಕ್ಕಳಿಗೆ ತಂದೆ ತಾಯಿಗಿಂತ ಮೊಬೈಲ್ ಮೇಲೆ ಮೋಹ!
ಪುಟ್ಟ ಮಕ್ಕಳು ಊಟಮಾಡಲು ಹಠ ಮಾಡುವುದು ಸರ್ವೇ ಸಾಮಾನ್ಯ ಆದರೇ ಇತ್ತೀಚಿಗೆ ಇದನ್ನು ಸರಿದೂಗಿಸಲು ಮೊಬೈಲ್ ಅಲ್ಲಿ ಗೊಂಬೆ ತೋರಿಸುವುದು ಒಂದು ಸಾಮಾನ್ಯ ರೀತಿ ಇಲ್ಲಿಂದ ಶುರು ಆದ ಮೊಬೈಲ್ ಚಟದಿಂದ ಹೆತ್ತ ತಾಯಿಯನ್ನು ಬಿಟ್ಟು ಬದುಕಬಹುದು ಆದರೆ ಮೊಬೈಲ್ ಬಿಟ್ಟು ಬದುಕುವುದು ಸಾಧ್ಯವಿಲ್ಲ ಎಂದು ಚಿಕ್ಕ ವಯಸ್ಸಿನಿಂದ ಮನಸ್ಸಿಗೆ ರೂಡಿ ಮಾಡಿಸುತ್ತಿದೆ ಇಗಿನ ಪ್ರಚಲಿತ ಜಗತ್ತು.ಅಷ್ಟೇ ಅಲ್ಲದೆ ಪುಟ್ಟ ಮಕ್ಕಳ ಕಣ್ಣಿನ ಮೇಲೆ ಮೊಬೈಲ್ನ ಬ್ಲೂ ರೇಸ್ ಗಳು ಬೀಳುವ ಪರಿಣಾಮದಿಂದ ಚಿಕ್ಕ ವಯಸ್ಸಿಗೆ ಕನ್ನಡಕ ಬರುವುದು ಸಾಮಾನ್ಯವಾಗಿದೇ. ಇದೆಲ್ಲ ತಿಳಿದಿರುವ ತಂದೆ ತಾಯಿಗಳು ತಮ್ಮ ಕೈ ಇಂದ ಮೊಬೈಲ್ ದೂರ ಮಾಡಿಕೊಂಡರೆ ಹಾಗೆ ಮೊಬೈಲ್ ನಿಂದ ಇರುವ ದುಷ್ಟ ಪರಿಣಾಮವನ್ನು ಅರಿತು ತಮ್ಮ ಮಕ್ಕಳ ಕ್ಕಳ ಇಂದ ಕೂಡ ದೂರಮಾಡಿದರೆ ಮುಂದಾಗುವು ಅನಾಹುತವನ್ನು ನಿಯಂತ್ರಿಸಬಹುದು.
ಮಕ್ಕಳಿಂದ ಮೊಬೈಲ್ ದೂರಾಗೊಳಿಸಬೇಕು ಏಕೆಂದರೆ :-
ಪೋಷಕರಾಗಿ, ನಿಮ್ಮ ಮಗುವಿನ ಮೊಬೈಲ್ ಫೋನ್‌ಗಳ ಹಾನಿಕಾರಕ ಪರಿಣಾಮಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ನೀವು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು.
*ನಿಮ್ಮ ಮಗು ಮೊಬೈಲ್ ಫೋನ್ ಅನ್ನು ನೇರವಾಗಿ ತನ್ನ ತಲೆಯ ಮೇಲೆ ಹಿಡಿದಿಡಲು ಬಿಡಬೇಡಿ. ಬದಲಿಗೆ ಏರ್-ಟ್ಯೂಬ್ ಹೆಡ್‌ಸೆಟ್ ಬಳಸಿ.
*ನಿಮ್ಮ ಮಗುವಿಗೆ ಬಸ್ಸುಗಳು, ರೈಲುಗಳು, ಕಾರುಗಳು ಮತ್ತು ಎಲಿವೇಟರ್‌ಗಳಲ್ಲಿ ಕರೆ ಮಾಡಲು ಬಿಡಬೇಡಿ. ಲೋಹದ ಮೂಲಕ ಸಿಗ್ನಲ್ ಹೊರಬರಲು ಮೊಬೈಲ್ ಫೋನ್ ಹೆಚ್ಚು ಕೆಲಸ ಮಾಡುತ್ತದೆ, ಇದು ವಿದ್ಯುತ್ ಮಟ್ಟವನ್ನು ಹೆಚ್ಚಿಸುತ್ತದೆ.
*ಸಿಗ್ನಲ್ ದುರ್ಬಲವಾಗಿರುವಾಗ ನಿಮ್ಮ ಮಗುವಿಗೆ ಸೆಲ್ ಫೋನ್ ಬಳಸಲು ಬಿಡಬೇಡಿ. ಫೋನ್ ಹೊಸ ರಿಲೇ ಆಂಟೆನಾಗೆ ಸಂಪರ್ಕಿಸಲು ಪ್ರಯತ್ನಿಸುವುದರಿಂದ ಇದು ಗರಿಷ್ಠ ಶಕ್ತಿಯನ್ನು ಹೆಚ್ಚಿಸುತ್ತದೆ.
*ಮಕ್ಕಳ ಸುತ್ತ ಸೆಲ್ ಫೋನ್ ಬಳಕೆಯನ್ನು ಮಿತಿಗೊಳಿಸಿ.
ನಿಮ್ಮ ಮನೆ ಅಥವಾ ನಿಮ್ಮ ಮಕ್ಕಳ ಶಾಲೆಯ ಬಳಿ ಯಾವುದೇ ಮೊಬೈಲ್ ಫೋನ್ ಮಾಸ್ಟ್ ಅಥವಾ ನೆಟ್‌ವರ್ಕ್ ಟವರ್ ಇಲ್ಲ ಎಂದು ಖಚಿತಪಡಿಸಿಕೊಳ್ಳಿ.
*ಮಕ್ಕಳು ಶಾಲೆಗೆ ಮೊಬೈಲ್ ತೆಗೆದುಕೊಂಡು ಹೋಗಲು ಬಿಡಬೇಡಿ.
*ರಾತ್ರಿ ವೇಳೆ ನಿಮ್ಮ ಮಕ್ಕಳ ಮಲಗುವ ಕೋಣೆಯಲ್ಲಿ ಮೊಬೈಲ್ ಫೋನ್ ಗಳನ್ನು ಇಡಬೇಡಿ
ನಾನು ಹೇಗೆ ಬಿಡಲಿ ಈ ನನ್ನ ಸಂಗಾತಿಯನ್ನು?
ಬಿಡಲು ನೂರಾರು ದಾರಿ ಇದ್ದಾವೆ ಆದರೇ ಅದಕ್ಕಿಂತ ಮುಖ್ಯ ವಾದ ವಿಷಯವನ್ನು ತಿಳಿದುಕೊಳ್ಳಿ.. ನಿಮ್ಮ ಜೊತೆ ಇರುವ ಪ್ರೀತಿಪಾತ್ರರಿಗಾಗಿ ನೀವು ಬದುಕಿ ಮೊಬೈಲ್ ನೋಡುತ್ತಾ ಇಡೀ ದಿನ ಬದುಕುವ ಬದುಕಿಗೆ ಬದುಕು ಎನ್ನುವುದಿಲ್ಲ ಅದನ್ನು ಬದುಕಲು ಮನುಷ್ಯನಾಗಿ ಹುಟ್ಟಬೇಕಿರಲಿಲ್ಲ. ಜೀವನ ತುಂಬಾ ವಿಶಾಲವಾಗಿದೆ ಎಂದು ಅರಿತುಕೊಳ್ಳಿ ಈ ಪುಟ್ಟ ಮೊಬೈಲನ್ನು ಬಿಟ್ಟು ಸರ್ವತೋಮುಖ ಅಭಿವೃದ್ದಿಗಾಗಿ ಜೀವಿಸಿ. ಈ ಮೊಬೈಲನ್ನು ಕೇವಲ ಬೇಕಿರುವಾಗ ಬಳಸಿ ಇದನ್ನು ನಮ್ಮ ದೇಹದ ಅಂಗಾಂಗದಂತೆ ಸದಾ ಅದರ ಜೊತೆಯಲ್ಲಿ ಬದುಕುವುದನ್ನ ಬಿಟ್ಟು ಸುಂದರ ಜಗತ್ತು ನಿಮ್ಮ ಕಣ್ಣೆದುರಿಗಿದೆ. ಮೊಬೈಲ್ ಎಂಬ ಕಣ್ಣಪಟ್ಟಿ ತಗೆದು ಜಗವ ನೋಡಲು ಆರಂಭಿಸಿ ತಲೆಯನ್ನು ಎತ್ತಿ ಬದುಕುವಂತಾಗುವಿರಿ . ಸುಂದರ ಬದುಕಿನ ಅನುಭವಗಳು ನಿಮ್ಮದಾಗುವುದು.
ಇಂತಿ ನಿಮ್ಮ್ ಪ್ರೀತಿಯ
-ರೋಹಿತ್ ಡಿ ಎಸ್.
Comments
Post a Comment