ಜೀವನದಲ್ಲಿ ಏನನ್ನು ಪಡೆದಿದ್ದರು ಪಡೆಯದಿದ್ದರೂ ನಾವು ಸುಖದಿಂದ ಇರಬಹುದು . ಆದರೆ ಆ ಇಬ್ಬರು ದೇವರುಗಳು ಇಲ್ಲದ ಬದುಕು ಬರಡು. ಹೌದು ಓದುಗರೆ ತಂದೆ ತಾಯಿಗಳೆಂಬ ದೇವರು ಬೆಲೆಕಟ್ಟಲಾಗದ ಮಾಣಿಕ್ಯಧಷ್ಟು ಅಮೂಲ್ಯ. ಜಗತ್ತಿನಲ್ಲಿ ಯಾವ ದೇವರುಗಳು ದೊಡ್ಡದೆಂದರೆ ಅದು ತಂದೆ ತಾಯಿಯೇ. ಏಕೆಂದರೆ ಅವರಿಲ್ಲದೆ ನಾವಿಲ್ಲ. ಪ್ರಪಂಚದಲ್ಲಿ ಯಾವ ತಾಯಿಯು ತನ್ನ ಮಗನಿಗೆ ಕೆಡಕು ಬಯಸಿದ ಸನ್ನಿವೇಶವೇ ಇಲ್ಲ. ಯಾವ ತಂದೆಯು ತನ್ನ ಮಗನನ್ನು ಪ್ರೀತಿಸದಾ ನಿದರ್ಶನವಿಲ್ಲ. ಆದರೆ ಈ ವಜ್ರಗಳನ್ನು ದ್ವೇಷ ಮಾಡುವ ಬೈಯುವಂತಹ ನೀಚ ಮಕ್ಕಳಿದ್ದಾರೆ ಎಂದರೆ ನಂಬಲು ಅಸಾಧ್ಯ ಆದರೆ ಅದೇ ಸತ್ಯ.
ತಾನ್ನ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಮಕ್ಕಳಿಗೆ ಕೈತುತ್ತು ಇಟ್ಟ ತಾಯಂದಿರಿದ್ದಾರೆ ಬೆಳಗ್ಗೆ ರಾತ್ರಿ ಎಂದು ನೋಡದೆ ದೇಹ ಸವಿಸಿ ದುಡಿದ ತಂದೆಯಂದಿರು ಇದ್ದಾರೆ. ಇವರ ಕಷ್ಟ ಮಕ್ಕಳ ಮನಸ್ಸಿಗೆ ಗೊತ್ತಾಗುವುದಿಲ್ಲವೆ. ತನ್ನ ಮಗ ಕುರೂಪಿಯಾಗಿದ್ದರೆ ಎದೆ ಹಾಲು ಕೊಡುವುದನ್ನು ನಿಲ್ಲಿಸಿದ ತಾಯಂದಿರಿಲ್ಲ. ಆದರೆ ತಾಯಿ ಆಚಾತುರ್ಯವಾಗಿ ಕಾಯಿಲೆ ಹೊಂದಿದರೆನೋಡಿಕೊಳ್ಳಲಾಗದೆ ಅವರನ್ನು ವೃದ್ಧಾಶ್ರಮಕ್ಕೆ ತಳೋ ಮಕ್ಕಳಿದ್ದಾರೆ ಸ್ವಾಮಿ. ಮಗನಿಗೆ ಹುಷಾರ್ ಇಲ್ಲದಿದ್ದರೆ ಹೆಗಲ ಮೇಲೆ ಹೊತ್ತುಕೊಂಡು ಹೋದ ತಂದೆ ಇದ್ದಾರೆ. ಆದರೆ ಅವರಿಗೆ ಆರಾಮ್ ಇಲ್ಲದಾಗ ಗುಳಿಗೆಯನ್ನ ತಂದುಕೊಡದ ಮಕ್ಕಳಿದ್ದಾರೆ.
ತನ್ನ ಮಕ್ಕಳಿಗೆ ಸಾಲಸೋಲ ಮಾಡಿ ವಿದ್ಯಾಭ್ಯಾಸ ಮಾಡಿಸಿ ವಿದೇಶಕ್ಕೆ ಕಳಿಸುವ ಪೋಷಕರು ಇರುವಾಗ ಅವರಿಗೆ ವೃದ್ಧಾಶ್ರಮ ಸೇರಲು ಹೇಳು ಮಕ್ಕಳಿದ್ದಾರೆ ಸ್ವಾಮಿ. ದುಃಖವನ್ನು ಮನದಲ್ಲಿಟ್ಟುಕೊಂಡು ಮಕ್ಕಳಿಗೆ ಪ್ರೀತಿಯನ್ನು ನೀಡುವ ದೇವರಿಗೆ ಸಾಯುವವರೆಗೂ ದುಃಖ ನೀಡುವ ಮಕ್ಕಳಿದಾರಲ್ಲ ಓದುಗರೇ. ಇದು ಎಂತಹ ವಿಪರ್ಯಾಸ ಅಲ್ಲವೇ.
ಎಷ್ಟೇ ನೋವನ್ನು ಅನುಭವಿಸಿದರು ತಮ್ಮ ಮಕ್ಕಳನ್ನು ಪ್ರೀತಿಸದೆ ಇರಲ್ಲ ತಂದೆ ತಾಯಂದಿರು. ಇವರ ಮನಸ್ಸಲ್ಲಿ ಮಕ್ಕಳ ಮೇಲೆ ಎಷ್ಟು ಪ್ರೀತಿ ತುಂಬಿಕೊಂಡು ಇರಬಹುದಲ್ಲವೇ.
ಎಲ್ಲೋ ಕಾಣದ ಕೈಗೆ ಸಿಗದ ಕಲ್ಲು ಮೂರ್ತಿಯನ್ನು ಪೂಜಿಸುವನು ಕ್ಕಿಂತ ಮನ ದೇವರಂತೆ ತಂದೆ-ತಾಯಿಯರನ್ನು ಪ್ರೀತಿಸಿರಿ. ಅತ್ಯಮೂಲ್ಯವಾದ ಈ ಮಾಣಿಕ್ಯವನ್ನು ಕಳೆದುಕೊಂಡರೆ ಪಡೆಯಲಾಗದು. ತಂದೆ-ತಾಯಂದಿರು ನಾಲ್ಕು ಮಾತು ಬೈಯಬಹುದು ಹೊಡೆಯಬಹುದು ಆದರೆ ಎಂದು ದ್ವೇಷಿಸುವುದಿಲ್ಲ ಅಂಥವರನ್ನು ನಾವೆಲ್ಲ ಸಹೃದಯದಿಂದ ಪ್ರೀತಿಸೋಣ ಪ್ರೇಮಿಸುವ ಪೂಜಿಸೋಣ.
ಉಸಿರನ್ನು ಕೊಟ್ಟ
ಹೆಸರನ್ನು ಇಟ್ಟ
ಪ್ರೀತಿಯನ್ನು ಕೊಟ್ಟ
ಆಹಾರವನ್ನು ಇಟ್ಟ
ವಿದ್ಯಾಭ್ಯಾಸ ಕೊಟ್ಟ
ಅಮೂಲ್ಯ ದೇವತೆಗಳಿಗೆ
ಮನ ಅಂತರಾಳದ ಪ್ರೀತಿ ಕೊಡಿರಿ
ಮುದ್ದು ಕಂದಮ್ಮಗಳ ರೋಹಿತ್. ಡಿ. ಎಸ್
Comments
Post a Comment