ವಿಶ್ವದಲ್ಲಿ ಅಪೌಷ್ಟಿಕತೆ ತಾಂಡವವಾಡುತ್ತಿದ್ದು ಭಾರತ ಅದರ ರಾಯಭಾರಿ ಆಗಿದೆ. ಹೌದು ! ವಿಶ್ವದಲ್ಲಿ ಕುಂಠಿತ ಬೆಳವಣಿಗೆಯಾದ ಜನರ ಸಂಖ್ಯೆ 150.8 ದಶಲಕ್ಷ ಇದ್ದರೆ ಅದರಲ್ಲಿ ಭಾರತೀಯರು 46.6 ದಶಲಕ್ಷದಷ್ಟು ಇದ್ದಾರೆ. ಇದರಲ್ಲಿ 34.7% ರಷ್ಟು 5 ವರ್ಷದ ಒಳಗಿನ ಪುಟ್ಟ ಮಕ್ಕಳು ಕುಂಠಿತ ಬೆಳವಣಿಗೆಗೆ ಒಳಗಾಗಿದ್ದಾರೆ.ಆದರೇ ನಮ್ಮ ಸಮಾಜದ ಯಾವುದೇ ಮಗುವು ಹಿಂದುಳಿಯಲು ಬಯಸುವುದಿಲ್ಲ, ಆದರು ಆ ಹಿಂದುಳಿಯುವಿಕೆಗೆ ನೂಕುವುದು ಕುಪೋಷಣೆ. ಈ ಅಪೌಷ್ಟಿಕತೆಯನ್ನು ತಡೆಯಲು ಸೆಪ್ಟಂಬರ್ ಮೊದಲವಾರವನ್ನು ಪೌಷ್ಟಿಕ ವಾರ ಎಂದು ಪರಿಗಣಿಸಿರುವುದು.
ಭಾರತವನ್ನು ಏಕೆ ಕಾಡುತ್ತಿದೆ ಅಪೌಷ್ಟಿಕತೆ?
ಭಾರತದಲ್ಲಿ ಕುಂಠಿತ ಬೆಳವಣಿಗೆ ಸಮಸ್ಯೆಗೆ ಒಳಗಾದವರು ಎಷ್ಟಿದ್ದಾರೆ ಅಷ್ಟೇ ಅತಿಯಾದ ಬೊಜ್ಜಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಅಷ್ಟೇ ಇದ್ದಾರೆ . ಇದು ನಮ್ಮ ದೇಶದ ವ್ಯವಸ್ಥೆಯ ಪ್ರಭಾವ.
ಬಡತನ ಹಾಗೂ ಆಹಾರ ಬೆಲೆಗಳು:
ದಿನದಿಂದ ದಿನಕ್ಕೆ ಆಹಾರ ಪದಾರ್ಥದ ಬೆಲೆ ಹೆಚ್ಚಾಗುತ್ತಿದ್ದು ಬಡತನದಲ್ಲಿ ಬದುಕುವವರು ಇವುಗಳನ್ನು ಕೊಳ್ಳಲಾಗದೆ ತಮ್ಮ ಬೆಲೆಗೆ ಸಿಗುವ ಪದಾರ್ಥಗಳನ್ನು ಕೊಳ್ಳುತ್ತಾರೆ. ಪ್ರತಿನಿತ್ಯ ಅದೇ ಪದಾರ್ಥಗಳನ್ನು ಬಳಸುವುದರಿಂದ ಇತರೆ ಪದಾರ್ಥಗಳಲ್ಲಿರುವ ಶಕ್ತಿ ಅವರಿಗೆ ತಲುಪುವುದಿಲ್ಲ. ಹೀಗಾಗಿ ಅವರು ಅಪೌಷ್ಟಿಕತೆಗೆ ತುತ್ತಾಗುತ್ತಿದ್ದಾರೆ.
ಆಹಾರ ಸೇವನೆ ಪದ್ಧತಿಗಳು:
ಶಿಶುಗಳು ಹಾಗೂ ಮಕ್ಕಳಲ್ಲಿ ಎದೆಹಾಲು ಕುಡಿಸದಿರುವಿಕೆಯು ಅಪೌಷ್ಟಿಕತೆಗೆ ದಾರಿ ಮಾಡುತ್ತದೆ. ಪ್ರಗತಿಶೀಲ ವಿಶ್ವದಲ್ಲಿ ಹೀಗೆ ಮಾಡಲು ಸಾಧಾರಣ ಕುಟುಂಬಗಳು ಶೀಷೆ/ಬಾಟಲ್ ಹಾಲಿನ ಸೇವನೆಯೇ ಉತ್ತಮವೆಂದು ಭಾವಿಸಿರುವುದು ಇದಕ್ಕೆ ಕಾರಣವಿರಬಹುದು.
ಕೃಷಿ ಉತ್ಪಾದಕತೆ:
ಪುಟ್ಟ ದೇಶದಲ್ಲಿ ದೊಡ್ಡ ಜನಸಂಖ್ಯೆ ಇರುವುದರಿಂದ ಕೃಷಿ ಉತ್ಪಾದನೆ ಎಲ್ಲರಿಗೆ ಎಟಕುವಷ್ಟು ಮಾಡುವುದು ಅಸಾಧ್ಯ ಏನಲ್ಲ. ಆದರೆ ಮಾಡುವಷ್ಟು ತಂತ್ರಜ್ಞಾನ ಭಾರತ ದೇಶದಲ್ಲಿ ಇನ್ನೂ ಬೆಳೆದಿಲ್ಲ. ಇದರಿಂದ ಅನೇಕ ಜನರು ಹಸಿವಿನಿಂದ ಬಳಲುತ್ತಿದ್ದಾರೆ.
ಅಪೌಷ್ಟಿಕತೆಯ ಲಕ್ಷಣಗಳು?
* ಮತ್ತೆ ಮತ್ತೆ ಅನಾರೋಗ್ಯ ಬೀಳುವುದು.
* ವಯಸ್ಸಿಗೆ ತಕ್ಕಂತೆ ತೂಕ ಹಾಗೂ ಎತ್ತರ ಹೆಚ್ಚಾದಿರುವುದು.
* ಯಾವಾಗಲೂ ಸುಸ್ತಿನಿಂದ ಹಾಗೂ ಸಿಟ್ಟಿನಿಂದ ಇರುವುದು.
* ಶಿಶುವಿನ ಬೆಳವಣಿಗೆ ಕುಂಠಿತವಾಗಿರುವುದೂ.
* ಯಾವುದೇ ಕೆಲಸದ ಮೇಲೆ ಆಸಕ್ತಿ ತೋರಿಸದಿರುವುದು.
ಈ ರೀತಿ ಅನೇಕ ಲಕ್ಷಣಗಳನ್ನು ಅಪೌಷ್ಟಿಕತೆ ತೋರುತ್ತದೆ.
* ಗಾಯ ಉಂಟಾದರೆ ಗುಣಮುಖವಾಗಲು ಅಧಿಕ ಸಮಯ ತೆಗೆದುಕೊಳ್ಳುವುದು.
* ಶಸ್ತ್ರಚಿಕಿತ್ಸೆಯ ನಂತರ ಅಧಿಕ ತೊಡುಕುಗಳು ಕಾಣಿಸಿಕೊಳ್ಳುತ್ತವೆ.
* ಖಿನ್ನತೆ ಕಾಣಿಸಿಕೊಳ್ಳುವುದು.
* ಪುರುಷ ಮತ್ತು ಮಹಿಳೆಯರಲ್ಲಿ ಫಲವತ್ತತೆಯ ಕೊರತೆ ಉಂಟಾಗುವುದು.
* ಉಸಿರಾಟದ ಸಮಸ್ಯೆ.
* ಚರ್ಮವು ತೆಳುವಾಗುವುದು, ಅತಿಯಾಗಿ ಚಳಿಯ ಸಂವೇದನೆಗೆ ಒಳಗಾಗುವುದು.
* ಕೂದಲು ಹಾಗೂ ಚರ್ಮವು ಶುಷ್ಕತೆಯನ್ನು ಪಡೆಯುವುದು.
2012ರ ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲಾ ದೇಶಗಳಿಗೂ ಅಪೌಷ್ಟಿಕತೆಯನ್ನು ನಿಲ್ಲಿಸಲು ಕೆಲವು ಗುರಿಯನ್ನು ನಿಡಿತ್ತು :
* 5 ವರ್ಷದೊಳಗಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯನ್ನು ಶೇಕಡ 40 ರಷ್ಟು ಕಡಿಮೆ ಮಾಡುವುದು.
* ಕಡಿಮೆ ತೂಕದಲ್ಲಿ ಜನಿಸುವ ಮಕ್ಕಳನ್ನು ಶೇಕಡ 30ರಷ್ಟು ತಗ್ಗಿಸುವುದು.
* ಅನೇಮಿಯ ದಿಂದ ಬಳಲುವ ಹೆಣ್ಣುಮಕ್ಕಳನ್ನು ಶೇಕಡಾ 50ರಷ್ಟು ಕಡಿಮೆ ಮಾಡುವುದು.ಈ ರೀತಿ ಅನೇಕ ಗುರಿಯನ್ನು ಎಲ್ಲಾ ದೇಶಕ್ಕೂ ವಿಶ್ವ ಆರೋಗ್ಯ ಸಂಸ್ಥೆ ನೀಡಿತ್ತು.
ಅಪೌಷ್ಟಿಕತೆಯನ್ನು ತಡೆಗಟ್ಟಲು ಪ್ರತಿಜ್ಞೆ ಮಾಡಿ!
ಅಪೌಷ್ಟಿಕತೆಗೆ ಮುಖ್ಯಕಾರಣ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸರಿಯಾದ ಪೋಷಕಾಂಶಗಳನ್ನು ಪಡೆಯದಿರುವುದು.
*ಗರ್ಭಿಣಿಯರಿಗೆ ಹಸಿರು ಎಲೆಗಳ ತರಕಾರಿಗಳು, ಕಾಳುಗಳು, ಮೊಟ್ಟೆಗಳು, ಹಾಲು ಮತ್ತು ಹಣ್ಣುಗಳಂಥ ಪೌಷ್ಟಿಕ ಆಹಾರಗಳನ್ನು ಉತ್ತಮ ಪ್ರಮಾಣದಲ್ಲಿ ನೀಡಬೇಕು.ಅವರು ಐಯೊಡೀನ್‌ಯುಕ್ತ ಉಪ್ಪಿನ ಜೊತೆ ಬೇಯಿಸಿದ ಆಹಾರವನ್ನ ಅವಳಿಗೆ ನೀಡಬೇಕು ಮತ್ತು ಅವಳಿಗೆ ಐರನ್ ಫೋಲಿಕ್ ಆಸಿಡ್ ಮಾತ್ರೆಗಳನ್ನು ನೀಡಬೇಕು.ಯುವಕರು ಗರ್ಭಾವಸ್ಥೆಯಲ್ಲಿ ಅವರ ಪತ್ನಿಯರನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರತಿಜ್ಞೆ ಮಾಡಬೇಕು.ಅವಳು ಸಮಯಕ್ಕೆ ಸರಿಯಾಗಿ ಊಟ ಮಾಡುವುದನ್ನು ಮತ್ತು ಅವಳು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.
*ಏಳನೇ ತಿಂಗಳಿಂದ, ಅವರು ತನ್ನ ಮಗು ಮನೆಯಲ್ಲಿ ಬೇಯಿಸಿದ ವೈವಿಧ್ಯಮಯ ಪೌಷ್ಟಿಕ ಆಹಾರಗಳ ಜೊತೆಗೆ ಎದೆಹಾಲು ಕುಡಿಯುವುದನ್ನೂ ಮುಂದುವರೆಸುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು.ಮಹಿಳೆಯರು ತಮ್ಮ ನವಜಾತ ಶಿಶುವಿಗೆ ತಮ್ಮ ಮೊದಲ ದಪ್ಪ ಹಾಲನ್ನು (ಪ್ರಥಮಸ್ತನ್ಯ) ನೀಡುತ್ತಾರೆ ಹಾಗೂ ಮೊದಲ ಆರು ತಿಂಗಳ ಕಾಲ ಅವರು ತಮ್ಮ ಮಗುವಿಗೆ ಕೇವಲ ಸ್ತನ್ಯಪಾನ ಮಾಡಿಸುತ್ತಾರೆ ಎಂದು ಪ್ರತಿಜ್ಞೆ ಮಾಡಬೇಕು.ಅವರ ಮಗು ಏಳನೇ ತಿಂಗಳಿಗೆ ಬಂದಾಗ, ಅವರ ಎದೆಹಾಲಿನ ಜೊತೆಗೆ, ಅವರು ಆಹಾರದಲ್ಲಿ ಮನೆಯಲ್ಲಿ ಬೇಯಿಸಿದ ಆರೋಗ್ಯಕರ ಆಹಾರವನ್ನೂ ನೀಡಬೇಕು.
*ನಾವು ಸೇವಿಸುವ ಆಹಾರ ಕ್ರಮವನ್ನು ಆರೋಗ್ಯ ರೀತಿಯಲ್ಲಿ ಇರುವಂತೆ ಮುನ್ನೆಚ್ಚರಿಕೆ ವಹಿಸಬೇಕು. ದೇಹಕ್ಕೆ ಬೇಕಾಗುವಂತಹ ಉತ್ತಮ ಕಾರ್ಬೋಹೈಡ್ರೇಟ್ಸ್, ವಿಟಮಿನ್, ಖನಿಜಾಂಶ ಹಾಗೂ ಪೋಷಕಾಂಶ ಇರುವ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು.
* ಅಪೌಷ್ಟಿಕತೆ ತಡೆಗಟ್ಟಲು ಸರ್ಕಾರವು ಅಧಿಕ ಸೌಲತ್ತುಗಳನ್ನು ಮಾಡಿಕೊಟ್ಟಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಇರಬಹುದು ಅಥವಾ ಅಂಗನವಾಡಿಯಿಂದ ಗರ್ಭಿಣಿಯರಿಗೆ ವಿವಿಧ ದವಸ ಧಾನ್ಯಗಳು ಹಾಗೂ ಮೊಟ್ಟೆ ವಿತರಣೆ ಇರಬಹುದು. ಇನ್ನೂ ಅನೇಕ ಉತ್ತಮ ಸವಲತ್ತುಗಳನ್ನು ಸರ್ಕಾರ ಜನರಿಗೆ ರೂಪಿಸಿದೆ. ಇವುಗಳನ್ನು ಸರಿಯಾಗಿ ಬಳಸಿಕೊಂಡು ನಾವೆಲ್ಲರೂ ಅಪೌಷ್ಟಿಕತೆಯಿಂದ ದೂರವಾಗೋಣ. ಆರೋಗ್ಯ ಭಾರತದ ನಿರ್ಮಿಸೋಣ.
-ರೋಹಿತ್. ಡಿ. ಎಸ್.
Comments
Post a Comment